ಕರ್ನಾಟಕದ ಶಾಲೆಗಳು ಮತ್ತು ಮಧ್ಯದಲ್ಲೇ ಶಾಲೆಯನ್ನು ಬಿಡುವ ಮಕ್ಕಳ ಅಂಕಿಅಂಶಗಳು
ಒಟ್ಟು ಮಕ್ಕಳ ದಾಖಲಾತಿ - 10,192,128
ಒಟ್ಟು ಮಕ್ಕಳ ದಾಖಲಾತಿ 95.71%
ಮಧ್ಯದಲ್ಲೇ ಶಾಲೆ ಬಿಟ್ಟ ಮಕ್ಕಳು 2.25%
Dropouts 2.25%

ಅಬ್ಬಾ ಈ ಅಂಕಿ ಅಂಶ ಕಡಿಮೆಯಾಗುತ್ತಿದೆ, ಮಕ್ಕಳು ಶಾಲೆಯನ್ನು ಮಧ್ಯದಲ್ಲೇ ಬಿಡುವ ಪ್ರಕ್ರಿಯೆ ಕಡಿಮೆಯಾಗುತ್ತಿದೆ, ಇದಕ್ಕೆ ಸರ್ಕಾರದ ಸರ್ವ ಶಿಕ್ಷಣ ಅಭಿಯಾನಕ್ಕೆ ನಮ್ಮ ಕೃತಜ್ಞತೆಗಳು.ಹಾಗು ಮಕ್ಕಳನ್ನು ಶಾಲೆಗೆ ಅದರಲ್ಲೂ ಸರ್ಕಾರಿಶಾಲೆಗೆ ಕಳಿಸುವ ಈ ವಿಚಾರ ಸಂತೋಷ ತರುತ್ತದೆ.
Credit- nammashale.org

ವಿಜ್ಞಾನ ಸಂವಹನ

ವೈಜ್ಞಾನಿಕ ಸಾಹಿತ್ಯ

ಕರ್ನಾಟಕದ ಸರ್ಕಾರೀ ಶಾಲೆಯ ವಿವರಗಳು

ಕಿರಿಯ ಪ್ರಾಥಮಿಕ ಶಾಲೆಗಳು

0

ಹಿರಿಯ ಪ್ರಾಥಮಿಕ ಶಾಲೆಗಳು

0

ಪ್ರೌಢಶಾಲೆಗಳು

0
(2016-2017)ರ ಪ್ರಕಾರ

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಂಪನ್ಮೂಲ

ವಿಜ್ಞಾನ - ಖಗೋಳ ಶಾಸ್ತ್ರ - ತರಗತಿ - ೩

ಮಕ್ಕಳಿಗೆ ವಿಜ್ಞಾನವನ್ನು ವಿವರಿಸುವಾಗ ಮೊದಲು ಚಿತ್ರ ರಹಿತವಾಗಿ ವಿವರಿಸಿ ನಂತರ ಕೆಲವು ಪ್ರಶ್ನೆಗಳನ್ನು ಕೇಳಿ .
೧.ಮಕ್ಕಳೇ ನೀವು ಇರುವ ಈ ಭೂಮಿ ಗುಂಡಾಗಿದೆಯೇ?
೨.ನಾವು ಸೂರ್ಯನನ್ನು ಸುತ್ತುವ ಒಂದೇ ಗ್ರಹವೇ?
೩.ನಮ್ಮ ಸೂರ್ಯನ ಬಗ್ಗೆ ನಿಮಗೇನು ಗೊತ್ತು?
೪.ಸೌರಮಂಡಲದಲ್ಲಿ ನಮ್ಮ ಇತರ ಗ್ರಹಗಳು ಹೇಗೆ ಸೂರ್ಯನನ್ನು ಸುತ್ತುತಿವೆ, ಮಕ್ಕಳು ಇದನ್ನು ತಮ್ಮ ಕಲ್ಪನೆಯ ಮುಕಾಂತರ ಚಿಂತಿಸಲಿ, ಶಿಕ್ಷಕರು ಮಕ್ಕಳಿಗೆ ಚಿತ್ರಕಲೆಯಾ ಮುಕಾಂತರ ಸೌರಮಂಡಲದ ಕಲ್ಪನೆಯನ್ನು ತೋರಿಸಲಿ. ಮಕ್ಕಳ ಗುಂಪಿನನಲ್ಲಿ ಎಲ್ಲರು ಚಿತ್ರಮುಗಿಸಿದ ನಂತರ ನೀವು ಚಿತ್ರಸಹಿತವಾಗಿ ಮಕ್ಕಳಿಗೆ ನಮ್ಮ ಸೌರಮಂಡಲವನ್ನು ವಿವರಿಸಿ.
ಮತ್ತು ನಮ್ಮ ಭೂಮಿಯ ಪಥವನ್ನು ಹಾಗು ಭೂಮಿ ಸುತ್ತುವ ಪ್ರಕ್ರಿಯೆಯನ್ನು ಚಟುವಟಿಕೆಯ ಮುಕಾಂತರ ತಿಳಿಸಿ.
ದಿನಗಳು, ವರ್ಷಗಳ ಬಗ್ಗೆ ತಿಳಿಸಿ.

ಕರ್ನಾಟಕ ಸರ್ಕಾರದ ಕೆಲವು ಅಂತರ್ಜಾಲದ ಪುಟಗಳು

ವಿಜ್ಞಾನ ಸಂವಹನ - ವಿಜ್ಞಾನ ವೇದಿಕೆ

ನಾನು ನಿಮ್ಮ ಅಕ್ಷಯ್ ದಾಸ್, ವಿಜ್ಞಾನ ಮಿತ್ರ. ಮಕ್ಕಳಿಗಾಗಿ ಶೈಕ್ಷಣಿಕ ಚಟುವಟಿಕೆಗಳು, ಶಿಕ್ಷಕರಿಗೆ ಆಲೋಚನೆಗಳು (ನನ್ನ ಕೆಲವು ಶಿಕ್ಷಕರ ಕಿವಿ ಮಾತು ),ಹೌದು ಮಕ್ಕಳನ್ನು ವಿಜ್ಞಾನದಡೆಗೆ ಕರೆತರಲು, ಉಚಿತ ಆನ್‌ಲೈನ್ ಸಂಪನ್ಮೂಲಗಳು (Resources) ಮತ್ತು ಹೆಚ್ಚಿನದನ್ನು ಒಳಗೊಂಡಿರುವ ವ್ಯಾಪಕವಾದ ಮೋಜಿನ ವಿಜ್ಞಾನ ಪಾಠ-ಗೀಟ, ಪಾಡ್ಕ್ಯಾಸ್ಟ್ಸ್, ಯೋಜನೆಗಳನ್ನು ಆನಂದಿಸಿಲು, ನಿಮ್ಮ ಮನೆ ಅಥವಾ ತರಗತಿಗೆ ಸಂವಾದಾತ್ಮಕ ಹಾಗು ವಿಜ್ಞಾನದ ಮನಸುಗಳನ್ನು ಸೃಷ್ಟಿ ಮಾಡಲು ಇದೊಂದು ಪ್ರಯತ್ನ.

Picture credit : http://nammashale.org/

ನನ್ನ ಈ ಪುಟವನ್ನು ಸರ್ಕಾರೀ ಮತ್ತು ವಿದ್ಯೆಯಿಂದ ವಂಚಿತರಾಗುವ ಮಕ್ಕಳಿಗಾಗಿ ಪ್ರಾರಂಭಿಸಿರುವೆ. ನಿಮ್ಮ ಅತ್ತಿರದ ಅಥವಾ ನಿಮ್ಮ ಪಕ್ಕದ ಮನೆಯಲ್ಲೇ ಯಾರಾದರೂ ಸರ್ಕಾರೀ ಶಾಲೆಯ ಮಕ್ಕಳಿದ್ದರೆ ಅಥವಾ ದಿನ ಕೂಲಿ ಕೆಲಸದ ತಂದೆ ತಾಯಿಯ ಮಕ್ಕಳಿದ್ದರೆ ಅವರಿಗೆ ತಿಂಗಳಿಗೆ ೨ ಬಾರಿಯಂತೆ ಜ್ಞಾನ ಚಟುವಟಿಕೆಯ ಬಗ್ಗೆ ಜಾಗೃತಿ ಮೂಡಿಸಿ.
ನಿಮ್ಮ ಅತ್ತಿರದ ಸೈಬರ್ ಕೆಫೆಗಳಿಂದ ಪ್ರಿಂಟ್ ಮಾಡಿಸಿ ೨ ಪುಟಗಳಂತೆ ೨-೩ ವಿಷಯಗಳ ಮೇಲೆ ಅಭ್ಯಾಸ ಮಾಡಿಸಿ, ನೀವು ಇಂಜಿನಿಯರಿಂಗ್(B.E), BSc, ಕಲೆ, ವಾಣಿಜ್ಯ ಯಾವುದೇ ವಿಷಯದಲ್ಲಿ ಪದವೀಧರರು ಅಥವಾ ಪ್ರೌಢಶಾಲೆಯ ಮಕ್ಕಳಾಗಿರಬಹುದು, ನಿಮಗೆ ಆಸಕ್ತಿ ಇದ್ದಲಿ ಕಲಿಸಲು ಪ್ರಯತ್ನಿಸಿ. ಇಲ್ಲಿನ ಕಲಿಕಾ ಸಾಮಗ್ರಿಯನ್ನು ೨ನೇ ತರಗತಿ, ೫ನೇ ತರಗತಿ ಹಾಗೆ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾದ ಅಥವಾ ಓದಲು ಬರುವ ಯಾವ ಪುಟ್ಟ ಮಕ್ಕಳಿಗಾದರು ಇದರ ಬಗ್ಗೆ ಜಾಗೃತಿ ಮೂಡಿಸಿ.


ನನ್ನ ಆಸೆ ಏನೆಂದರೆ ಮಕ್ಕಳು ನೀವು ಕೊಡುವ ವರ್ಕ್ಷೀಟ್ ಕಲಿಯದಿದ್ದರೂ ಸಹ , ನಿಮ್ಮ ಆ ಕಲಿಸುವ ವಿಚಾರ ಬಡ ತಂದೆ ತಾಯೆಗೆ ಸ್ಪೂರ್ತಿಯಾಗಲಿ. ನಾವು ಎಷ್ಟೋ ಮಕ್ಕಳು ವಿದ್ಯೆಯಿಂದ ವಂಚಿತರಾಗುವುದನ್ನು ಗಮನಿಸುತ್ತೆವೆ, ಬಾಲ್ಯಕಾರ್ಮಿಕತೆ ಕಡಿಮೆ ಆಗಿದೆ ಆದರೆ ಸರ್ಕಾರದ ಸರ್ವ ಶಿಕ್ಷಣ ಅಭಿಯಾನದ ಕೀರ್ತಿ ಮಕ್ಕಳೇ ಸ್ವತಃ ಶಿಕ್ಷಣದ ಮಹತ್ವ ತಿಳಿದಾಗ ಮಾತ್ರ. ಅದನ್ನು ನಾವು ವಿಜ್ಞಾನ ವಿಸ್ಮಯಗಳ ಪರಿಚಯದಿಂದ, ಕೂತುಹಲ ಮೂಡಿಸುವ ವಿಜ್ಞಾನ ಪ್ರಯೋಗಗಳ ಮೂಲಕ ಹಾಗು ವಿಜ್ಞಾನ ವನ್ನು ಹೊರತು ಪಡಿಸಿ ಮಗು ತಾನು ಕಲಿಕೆಯಿಂದ ಹೇಗೆ ಉತ್ತಮ ನಾಗಬಲ್ಲ, ವಿದ್ಯೆ ವಿನಯದ ಲಕ್ಷಣ, ವಿದ್ಯೆ ಇಲ್ಲದವ ವಿನಯನಲ್ಲ ಎಂದಲ್ಲ, ವಿದ್ಯೆ ಯಾರು ಕದಿಯಲಾಗದ ಆಭರಣ. ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವುದು ನನ್ನ ಗುರಿ, ಆದರೆ ಮಗು ತಾನು ಆಸಕ್ತಿ ಇದ್ದ ಕಡೆ ಹೋಗಲಿಕ್ಕೆ ನಾವು ಬಿಡ ಬೇಕು , ಕಲೆ, ಸಂಗೀತ ಹಾಗು ಸಾಹಿತ್ಯ ಇವು ಸಹ ಬಹುಮುಖ್ಯವಾದ ಅಂಶಗಳಾಗಿವೆ.

ಸರ್ಕಾರೀ ಶಾಲೆಯ ಮಕ್ಕಳು ಹೇಗೆ ತಾನೇ ಈ ವೆಬ್ಸೈಟ್ (ಅಂತರ್ಜಾಲ) ಬಳಸಲು ಸಾಧ್ಯ ??

ಏಕೆಂದರೆ ಬಡತನದಿಂದ ಕೂಡಿರುವ ಮಕ್ಕಳಿಗೆ ನನ್ನ ಅಂತರ್ಜಾಲದ ಪುಟಗಳನ್ನು ಓದಲು ಶಿಕ್ಷಕರೇ ಸಹಾಯ ಮಾಡಬೇಕು, ಮೊಬೈಲ್ ಮತ್ತು ಕಂಪ್ಯೂಟರ್ ಸರ್ಕಾರೀ ಮಕ್ಕಳಿಗೆ ಲಭಿಸುವುದಿಲ್ಲ ಹಾಗು ನಾನು ಪುಟ್ಟ ಮಕ್ಕಳು ಮೊಬೈಲ್ ಬಳಸುವುದನ್ನು ಇಷ್ಟ ಪಡುವುದಿಲ್ಲ. ನಾನು ಸರಕಾರಿ ಶಾಲೆಯ ಶಿಕ್ಷಕರಿಗೆ ಕೆಲವು ಯೋಜನೆಯನ್ನು ರೂಪಿಸಿರುವೆ 

೧.ವರ್ಕ್‌ಶೀಟ್‌ಗಳು, ಶೈಕ್ಷಣಿಕ ಚಟುವಟಿಕೆಗಳು,ವಿಜ್ಞಾನ ಆಸಕ್ತಿ ಮೂಡಿಸುವ ಪಠ್ಯಕ್ರಮಗಳು ಮತ್ತು ಕಲಿಕಾ ಸಂಪನ್ಮೂಲಗಳನ್ನು ಭೌತಿಕವಾಗಿ ನೀಡಲಾಗುವುದು (ಬೆಂಗಳೂರಿನಲ್ಲಿ ಇದು ಲಭ್ಯವಿದೆ), ಅಗತ್ಯವಿದ್ದರೆ ನಮ್ಮ ಜ್ಞಾನದ – ಸ್ವರ್ಗ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು ಮತ್ತು ಅದನ್ನು ಪ್ರಿಂಟ್ ಮಾಡಿಸಿ ಮಕ್ಕಳಿಗೆ ನೀಡಿ ಚಟುವಟಿಕೆ ಮಾಡಿಸಬಹುದು.

೨.ಸಣ್ಣ ಮಕ್ಕಳಿಗೆ ಏಕೆ ನಮ್ಮ ಆಕಾಶ ನೀಲಿ ಬಣ್ಣದಿದೆ ? ಮಳೆ ಹೇಗೆ ಬರುತದ್ದೇ ? ಯಾರು ನೀರನ್ನು ಆಕಾಶದಿಂದ ಸುರಿಯುತ್ತಿದಾರೆ? ಈ ರೀತಿ ಪ್ರಶ್ನೆಯನ್ನು ಯಾವಾಗಲಾದರೂ ಕೇಳಿದ್ದೀರಾ ?? ಪ್ರಶ್ನೆ ಮಕ್ಕಳಿಗೆ ಕೂತುಹಲವನ್ನು ಮೂಡಿಸುವ ಹಾಗೆ ಇರಲಿ. ಮಕ್ಕಳು ಸಹ ಪ್ರಶ್ನಿಸುವಂತೆ ಮಾಡುವುದು ಈ ಚಟುವಟಿಕೆ ಉದ್ದೇಶ.

೩.ಸಣ್ಣ ಪಾಡ್ಕ್ಯಾಸ್ಟ್ಸ್ ಗಳನ್ನೂ ರೆಕಾರ್ಡ್ ಮಾಡಿ ಅಂತರ್ಜಾಲದ ಪುಟದಲ್ಲಿ ಇರಿಸಲಾಗುವುದು. 

ಅ) ವಿಜ್ಞಾನ 

ಆ) ಗಣಿತ 

ಇ) ಸಾಮಾನ್ಯ ಜ್ಞಾನ 

ಈ) ಕನ್ನಡ ಭಾಷೆ ಮತ್ತು ಕವಿ ಪುಂಗವರು 

ಮತ್ತೆ ಹಲವಾರು ಪಾಡ್ಕ್ಯಾಸ್ಟ್ಸ್ ಗಳನ್ನೂ ಪ್ರತಿವಾರದಂತೆ ಸೇರಿಸಲಾಗುವದು.

೩.ವಿಷಯದ ಮೂಲಕ ಆಯೋಜಿಸಲಾದ ಉತ್ತಮ ತರಗತಿಯ ಬೋಧನಾ ಸಂಪನ್ಮೂಲಗಳು ಮತ್ತು ಆಲೋಚನೆಗಳನ್ನು ಇಲ್ಲಿ ಸೇರಿಸಲಾಗಿದೆ. 

೪.ರಸಾಯನಶಾಸ್ತ್ರ ಪ್ರಯೋಗಗಳು, ಭೌತಶಾಸ್ತ್ರ ಆಟಗಳು, ಜೀವಶಾಸ್ತ್ರ ಪಾಠಗಳು, ಪ್ರಾಣಿಗಳ ವೀಡಿಯೊಗಳು, ತಂತ್ರಜ್ಞಾನ ಚಟುವಟಿಕೆಗಳು, ಮಾನವ ದೇಹದ ಭಾಗಗಳು, ಬಾಹ್ಯಾಕಾಶ ಚಿತ್ರಗಳು, ಹವಾಮಾನ ಯೋಜನೆಗಳು, ಸಸ್ಯ ರೇಖಾಚಿತ್ರಗಳು, ನೀರಿನ ರಸಪ್ರಶ್ನೆಗಳು, ಉಚಿತ ವರ್ಕ್‌ಶೀಟ್‌ಗಳು ಮತ್ತು ಹೆಚ್ಚಿನದನ್ನುಪಡೆಯಲು ಜ್ಞಾನ – ಸ್ವರ್ಗ ವೆಬ್ ಪುಟಗಳಿಗೆ ಭೇಟಿ ನೀಡಿ.  ಮತ್ತು ಹಲವಾರು ವಿಷಯಗಳನ್ನು ಮುಂದೆ ಸೇರಿಸಲಾಗುವುದು, ಭೂಮಿ, ಪ್ರಾಣಿಗಳು, ತಂತ್ರಜ್ಞಾನ, ನೀರು, ಜೀವಶಾಸ್ತ್ರ, ರಸಾಯನಶಾಸ್ತ್ರ ಮತ್ತು ಬಾಹ್ಯಾಕಾಶ ಮುಂತಾದ ವಿಷಯಗಳನ್ನು ಒಳಗೊಂಡಿರುವ ಈ ವಿಜ್ಞಾನ ಪಾಠ ಯೋಜನೆಗಳು ಮತ್ತು ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ವಿಜ್ಞಾನದ ಮೂಲಭೂತ ಅಂಶಗಳನ್ನು ಕಲಿಸಲು ಸೂಕ್ತವಾಗಿವೆ. ಪ್ರಾಥಮಿಕದಿಂದ ಪ್ರೌಢ ಶಾಲಾ ಹಂತದವರೆಗೆ ಮಕ್ಕಳು ಆನಂದಿಸುವ ವಿಜ್ಞಾನ ಚಟುವಟಿಕೆಗಳೊಂದಿಗೆ ಸವಾಲು ಹಾಕಿ. 

Coming Soon