ಹೊಸತರಹದ ಹಾದಿಏನಲ್ಲ
ಯಾರು ಕಂಡಿರದ ಹಾದಿ ನನ್ನದಲ್ಲ
ಸಾಮಾನ್ಯರಲ್ಲಿ ಸಾಮಾನ್ಯರು ಕಂಡ ಹಾದಿಯಲ್ಲಿ
ನನ್ನ ಪಯಣ ಜೀವನದ ಹಾದಿಯಲ್ಲಿ
ಲೋಕಮಾನ್ಯರು ಅಂದೊಮ್ಮೆ ಸಾಮಾನ್ಯರು
ಸಾಮಾನ್ಯರೇ ಮುಂದೊಮ್ಮೆ ಲೋಕಮಾನ್ಯರಾದವರಲ್ಲವೇ ?
ಸಾಮಾನ್ಯನನ್ನು ಹೀಯಾಳಿಸುವುದು ಸರಿಯೇ
ಇದು ನನ್ನ ಚಿಂತನೆ

ಕೂಸು ಕಂದನು ತುಸು ಹೊತ್ತು ನಂತರ
ನೋಡನೋಡುತ್ತಲೇ ಪ್ರಾಯದ ತರುಣ
ಅವನ ಹಾದಿಯಲ್ಲಿ ಆಟ- ಪಾಠಗಳೇ ಎಲ್ಲ
ಅದರಂತೆ ಕಲಿತೆ , ಕಲಿಯ ಬೇಕಲ್ಲವೇ ?
ಭಗವಂತನು ರಾಮನಾಗಿಯೂ ಕೃಷ್ಣನಾಗಿಯೂ
ಜನಿಸಿದರಂತೆ ನಮ್ಮಿ ಈ ಭೂಮಿಯಲ್ಲಿ
ನಾವು ಕೇಳಿದ ಕಥೆಯಲ್ಲಿ ಆತ ಕಂಡ ಭೂಮಿಯಲ್ಲಿ
ನಾವು ಸಹ
ಮೋಹ – ಆಸೆಗಳನ್ನು ತೊರೆದು ನಟ್ಟ – ನಡುರಾತ್ರಿ
ಹೊರಟು ಬುದ್ಧನ ಹಾದಿಯಂತೆನ್ನಲ್ಲ ನನ್ನ ಹಾದಿ
ತುಸು ಆತನಿಗಿಂತ ಹೆಚ್ಚೇ ಈ ಭ್ರಷ್ಟ ಸಂಸಾರವೆಂಬ
ಪ್ರಪಂಚದಲ್ಲಿ ಆದರೆ ಇದು ತಿಳಿದಿದ್ದ್ದು ನೀದಾನವಾಗಿ
ನನ್ನ ಇರಲಿ ಕ್ಷಣಕಾಗಿ ನಾನು ಇರಲಿ
ತುಸು ಹೊತ್ತು , ನಾವು ನಮ್ಮೆಲರ ಬರಲಿ
ಎಲ್ಲಾ ಸಮಯದಲ್ಲಿ ಎಂದು ಮಾಯವಾದವರು / ಅಮರರಾದ್ವರು
ಎಷ್ಟೋ ಜನ ಇದಕ್ಕೆ ಪರಿಯಾರ ಇದೆಎಂಬಲ್ಲಿ .
ಮುಗಿದಂತಾಗಿದೆ ನನಗೆ …..
ನನ್ನ ಪಯಣ ಜೀವನದ ಹಾದಿಯಲ್ಲಿ
ಅಕ್ಷಯ್ ಕುಮಾರ್ . ಆರ್
ನಿಮ್ಮ ಚಿಂತನೆಗೆ ಶರಣು.
ಧನ್ಯವಾದಗಳು… ಸಂಗೀತ… 🙂 🙂